ಅಭಿಪ್ರಾಯ / ಸಲಹೆಗಳು

ದೃಷ್ಟಿ ಮೂಲೋದ್ದೇಶಗಳು ಕಾರ್ಯಾಚರಣೆ

ಧ್ಯೇಯ ಹಾಗೂ ಘನೋದ್ದೇಶಗಳು
ಧ್ಯೇಯ

ರೇಷ್ಮೆ ಕೃಷಿ ಅಭಿವೃಧ್ಧಿಯ ಮೂಲಕ ಗ್ರಾಮೀಣ ಬಡ ಜನರಿಗೆ ಉದ್ಯೋಗಾವಕಾಶವನ್ನು ಒದಗಿಸುವುದು ಹಾಗೂ ಅಂತರರಾಷ್ಟ್ರೀಯ ಗುಣಮಟ್ಟದ ರೇಷ್ಮೆಯನ್ನು ಉತ್ಪಾದಿಸಿ ಲಾಭದಾಯಕ ವೃತ್ತಿಯನ್ನಾಗಿಸುವುದು.

ಘನೋದ್ದೇಶ:-

 • ಗ್ರಾಮೀಣ ಬಡ ಜನರಿಗೆ ಅನುಕೂಲವಾಗುವಂತೆ ರೇಷ್ಮೆ ಕೃಷಿಯನ್ನು ಹೊಸ ಕ್ಲಸ್ಟರ್‍ಗಳಲ್ಲಿ ವಿಸ್ತರಿಸಿ ಶೇ 5 ರಷ್ಟು ಉತ್ಪಾದನೆ ಹೆಚ್ಚಿಸಿ ಬೆಳವಣಿಗೆ ಸಾಧಿಸುವುದು.
 • ಯಾಂತ್ರೀಕರಣ ಹಾಗೂ ಉತ್ತಮ ತಾಂತ್ರಿಕ ನೈಪುಣ್ಯದಿಂದ ಗುಣಮಟ್ಟವನ್ನು ಉತ್ತಮಪಡಿಸುವುದು.
 • ಅಂತರರಾಷ್ಟ್ರೀಯ ಮಟ್ಟಕ್ಕೆ ಉತ್ಪಾದಕತೆಯನ್ನು ಹೆಚ್ಚಿಸುವುದು.
 • ಮಾರಾಟ ಸಂಸ್ಥೆ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸುವುದು.
 • ಸಂಶೋಧನೆ, ವಿಸ್ತರಣಾಕಾರ್ಯ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಬಲಪಡಿಸುವುದು.

ಕಾರ್ಯಾಚರಣೆ:

 • ಅಧಿಕ ಇಳುವರಿ ನೀಡುವ ಸುಧಾರಿತ ಹಿಪ್ಪುನೇರಳೆ ತಳಿಗಳನ್ನು ಬೆಳೆಸಿ ವಿಸ್ತೀರ್ಣ ಹೆಚ್ಚಿಸಲು ಬೆಂಬಲ ನೀಡುವುದು.
 • ಚಾಕಿ ಸಾಕಾಣಿಕೆ, ಫ್ರೌಢ ಹುಳು ಸಾಕಾಣಿಕೆ ಹಾಗೂ ಹಣ್ಣು ಹುಳುಗಳಿಗೆ ಅಗತ್ಯವಿರುವ ಶಿಫಾರಿತ ಸೂಕ್ಷ್ಮ ವಾತಾವರಣವನ್ನು ನಿರ್ಮಿಸಲು ಆಗತ್ಯವಾದ ಸಹಾಯಧನ ಹಾಗೂ ತಾಂತ್ರಿಕ ತಿಳುವಳಿಕೆ ನೀಡುವುದು.
 • ಅತ್ಯುತ್ತಮ ಗುಣಮಟ್ಟದ ರೇಷ್ಮೆ ಉತ್ಪಾದಿಸಲು ರೀಲಿಂಗ್ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳಲು ತಾಂತ್ರಿಕ ಬೆಂಬಲ ಹಾಗೂ ಸಹಾಯಧನ ಒದಗಿಸುವುದು.
 • ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಪ್ರೋತ್ಸಾಹಿಸಿ ನೀರನ್ನು ಸಂರಕ್ಷಿಸಿ ಹಿಪ್ಪುನೇರಳೆ ವಿಸ್ತೀರ್ಣವನ್ನು ಹೆಚ್ಚಿಸುವುದು.
 •  ಹಿಪ್ಪುನೇರಳೆ ತೋಟ ನಿರ್ವಹಣೆ ಹಾಗೂ ಹುಳು ಸಾಕಾಣಿಕೆಯನ್ನು ಯಾಂತ್ರೀಕರಣಗೊಳಿಸಿ ಕಾರ್ಮಿಕರ ಉಪಯೋಗ ಹಾಗೂ ಶ್ರಮವನ್ನು ಕಡಿಮೆಗೊಳಿಸುವುದು.
 •  ಮಾನವ ಸಂಪನ್ಮೂಲ ನಿರ್ವಹಣೆ ಮೂಲಕ ಎಲ್ಲಾ ಭಾಗೀದಾರರ ಸಾಮರ್ಥ್ಯ ಹೆಚ್ಚಿಸುವುದು.                                                                                           
 • ರೇಷ್ಮೆ ಉದ್ಯಮದ ಎಲ್ಲಾ ಭಾಗೀದಾರರಿಗೂ ಸಾಲ ಸೌಲಭ್ಯ ಪಡೆಯಲು ಸಹಾಯ ಮಾಡುವುದು.
 •  ಹೊಸ ತಳಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಸರ್ಕಾರಿ ಮತ್ತು ಖಾಸಗಿ ಭಾಗೀದಾರರಿಂದ ಉತ್ತಮ ಗುಣಮಟ್ಟದ ರೇಷ್ಮೆ ಮೊಟ್ಟೆಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಕ್ರಮಕೈಗೊಳ್ಳುವುದು.
 • ರೇಷ್ಮೆ ಗೂಡು ಹಾಗೂ ಕಚ್ಚಾ ರೇಷ್ಮೆ ಮಾರಾಟಕ್ಕೆ ಸೌಲಭ್ಯಗಳನ್ನು ಒದಗಿಸುವುದು.
 • ಹೊರಗಿನ ಸಂಸ್ಥೆ ಮೂಲಕ ಯೋಜನೆಗಳ ಕುರಿತು ಸತತ ಉಸ್ತುವಾರಿ ಹಾಗೂ ಮೌಲ್ಯಮಾಪನ ಕೈಗೊಳ್ಳುವುದು.

ಇತ್ತೀಚಿನ ನವೀಕರಣ​ : 15-05-2019 04:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರೇಷ್ಮೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080