ಅಭಿಪ್ರಾಯ / ಸಲಹೆಗಳು

ರೇಷ್ಮೆ ಪ್ರಾಮುಖ್ಯತೆ

ರೇಷ್ಮೆ ಮತ್ತು ಶ್ರೀಗಂಧವು  ಕರ್ನಾಟಕ ರಾಜ್ಯದ ಅದ್ವಿತೀಯ ಉತ್ಪನ್ನಗಳು.  ರೇಷ್ಮೆ ಕೃಷಿಯು ಕರ್ನಾಟಕದಲ್ಲಿ ಸಾಂಪ್ರದಾಯಿಕ ಬೆಳೆಯಾಗಿದ್ದು, ಸಾಂಸ್ಕೃತಿಕವಾಗಿ ವಿಶಿಷ್ಟ ಸ್ಥಾನ ಪಡೆದಿದೆ.  ಹಿಪ್ಪುನೇರಳ ಬೇಸಾಯದಿಂದ ವಸ್ತ್ರ ತಯಾರಿಸುವವರೆಗಿನ ಎಲ್ಲಾ ಹಂತದ ರೇಷ್ಮೆ ಕೃಷಿಯ ಚಟುವಟಿಕೆಗಳು ಅತ್ಯಂತ ರೋಮಾಂಚನಕಾರಿಯಾಗಿದೆ.

ಮೈಸೂರು ರೇಷ್ಮೆ ಭೌಗೋಳಿಕ ಸೂಚಕ ಸ್ಥಾನವನ್ನು ಪಡೆದಿರುತ್ತದೆ.  ರೇಷ್ಮೆ ಕೃಷಿಯು ಟಿಪ್ಪುಸುಲ್ತಾನ್‌ ಮತ್ತು ಮೈಸೂರು ರಾಜ ಒಡೆಯರ ರಾಜಶ್ರಯದಲ್ಲಿ ವೈಭವಾಗಿ ಬೆಳೆದು ಬಂದಿರುತ್ತದೆ.

ರೇಷ್ಮೆ ಕೃಷಿಯು ರೇಷ್ಮೆ ಹುಳು ಸಾಕಾಣಿಕೆ, ಹಿಪ್ಪುನೇರಳೆ ಬೇಸಾಯ ಹಾಗೂ ಕಚ್ಚಾ ರೇಷ್ಮೆ ಉತ್ಪಾದನೆಗಾಗಿ ನೂಲು ಬಿಚ್ಚಾಣಿಕೆಗಳನ್ನು ಒಳಗೊಂಡಿದ್ದು, ರಾಜ್ಯದಲ್ಲಿ 250 ವರ್ಷಗಳ ಹಿಂದಿನಿಂದಲೂ ಪ್ರಚಲಿತವಾಗಿದೆ. ಈ ಉದ್ಯಮವು ಕೃಷಿ ಮೂಲದ, ಕಾರ್ಮಿಕ ಪ್ರಧಾನ ಮತ್ತು ಆರ್ಥಿಕ ಸಬಲೀಕರಣಕ್ಕೆ ಸಹಾಯಕವಾದ ಪ್ರಮುಖ ಗುಡಿ ಕೈಗಾರಿಕೆಯಾಗಿದೆ.  ಈ ಕೈಗಾರಿಕೆಯು ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳ ಜನರ ಬಡತನವನ್ನು ನಿರ್ಮೂಲಗೊಳಿಸಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಹೊಂದಲು ಸಹಕರಿಸುವಲ್ಲಿ ಯಶಸ್ವಿಯಾಗಿದೆ.  ಉಪಕಸುಬಾಗಿದ್ದ ರೇಷ್ಮೆ ಕೃಷಿಯು ಇತ್ತೀಚಿಗೆ ಮುಖ್ಯ ಕಸುಬಾಗಿ ಪರಿಣಮಿಸುತ್ತಿದೆಯಲ್ಲದೆ, ರೇಷ್ಮೆ ವ್ಯವಸಾಯವನ್ನು ದೊಡ್ಡ ಪ್ರಮಾಣದಲ್ಲಿಯೂ ಕೈಗೊಳ್ಳಲು ರೈತರು ಮುಂದೆ ಬರುತ್ತಿದ್ದಾರೆ.

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ರೇಷ್ಮೆ ಕೃಷಿ ಮತ್ತು ರೇಷ್ಮೆ ಕೈಗಾರಿಕಾ ಚಟುವಟಿಕೆಗಳಿಂದ ವಾರ್ಷಿಕವಾಗಿ ಸುಮಾರು 60 ರಿಂದ 70 ಲಕ್ಷ ಜನಕ್ಕೆ ಉದ್ಯೋವಕಾಶಗಳು ದೊರೆಯುತ್ತಿವೆ. ರೇಷ್ಮೆ ಕೃಷಿಯು ಉನ್ನತ ಮತ್ತು ನಗರದ ಗ್ರಾಹಕರಿಂದ ರೈತರು ಮತ್ತು ಕುಶಲಕರ್ಮಿ ವರ್ಗಗಳಿಗೆ ಸಂಪತ್ತನ್ನು ವರ್ಗಾಯಿಸುವ ಪಾತ್ರ ನಿರ್ವಹಿಸುತ್ತಿದೆ. ಗ್ರಾಮೀಣ ಉದ್ಯೋಗ ಸೃಷ್ಟಿ ಮತ್ತು ಅಂತರ್ಗತ ಅಭಿವೃದ್ಧಿ ರೇಷ್ಮೆ ಕೃಷಿಯಿಂದ ಸುಲಭವಾಗಿ ಸಾಧ್ಯವಾಗುತ್ತದೆ ಮತ್ತು ಇದು ಮಹತ್ವದ ಗ್ರಾಮೀಣ ಪರಿವರ್ತನೆ ಕ್ಷೇತ್ರವಾಗಿದೆ.ರೇಷ್ಮೆ ಕೃಷಿಯಲ್ಲಿ ಶೇಕಡ 60ರಷ್ಟು ಕೆಲಸವನ್ನು ಮಹಿಳೆಯರು ನಿರ್ವಹಿಸುವುದರಿಂದ ಮಹಿಳೆಯ ಸಬಲೀಕರಣಕ್ಕೆ ರೇಷ್ಮೆ ಕೃಷಿ ಬಹು ಮುಖ್ಯ ಪಾತ್ರವಹಿಸಿದೆ.  ರಾಜ್ಯದ ಹಲವಾರು ಜಿಲ್ಲೆಗಳಲ್ಲಿ, ರೇಷ್ಮೆ ಕೃಷಿಯು ಸಣ್ಣ, ಅತಿ ಸಣ್ಣ ರೈತರು ಮತ್ತು ಸಮಾಜದ ದುರ್ಬಲ ವರ್ಗಗಳ ಮುಖ್ಯ ಕಸುಬು ಮತ್ತು ಸಾಂಪ್ರದಾಯಿಕ ಜೀವನಾಧಾರವಾಗಿದೆ.ಕರ್ನಾಟಕದ ಸುಮಾರು 12 ಲಕ್ಷ ಕುಟುಂಬಗಳಿಗೆ ರೇಷ್ಮೆ ಕೃಷಿ  ಮತ್ತು ರೇಷ್ಮೆ ಕೈಗಾರಿಕೆಗಳು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಬಹುಮುಖ್ಯ ಕ್ಷೇತ್ರಗಳಾಗಿರುತ್ತವೆ. 

 

ಇತ್ತೀಚಿನ ನವೀಕರಣ​ : 25-11-2021 03:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರೇಷ್ಮೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080